ಸನ್, ೨೦೧೦ ರ 'ಸಮ್ಮರ್ ಯೂತ್ ಒಲಂಪಿಕ್ಸ್' ಕ್ರೀಡಾಕೂಟಕ್ಕೆಂದೇ ನಿರ್ಮಿಸಲಾಗಿರುವ ಮೈದಾನ, 'ತೇಲುವ ಆಟದ ಮೈದಾನ'. ಈ ಆಟದ ಆಯೋಜನೆಯನ್ನು ಪ್ರಪ್ರಥಮವಾಗಿ ಈ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. 'ಕಡಲಮೇಲೆ ತೇಲಾಡುವ ಆಟದ ಮೈದಾನ'ದಲ್ಲಿ 'ಯೂತ್ ಒಲಂಪಿಕ್ಸ್' ವೀಕ್ಷಿಸುವ ಅದೃಷ್ಟ ಅಲ್ಲಿನ ಜನರಿಗೆ. == 'ಮೆರಿನಾ ಬೇ, ತೇಲುವ ಆಟದಂಗಳ' ದ ನಿರ್ಮಣ ಕಾರ್ಯವನ್ನು 'ಸಿಂಗಪುರ್ ಸ್ಪೋರ್ಟ್ಸ್ ಕೌನ್ಸಿಲ್' ವಹಿಸಿಕೊಂಡಿದೆ == ಸಿಂಗಪುರದ ಸುಪ್ರಸಿದ್ಧ 'ಮೆರಿನಾ ಬೀಚ್' ನಲ್ಲಿ ೨೦೦೭ ರಲ್ಲಿ ನಿರ್ಮಿಸಲಾಗಿರುವ ಈ 'ಆಟದಂಗಳ'ದ ಉದ್ದ, ೧೨೦ ಮೀಟರ್, ಮತ್ತು ಅಗಲ, ೮೩ ಮೀಟರ್. ಭಾರಹೊರುವ ಸಾಮರ್ಥ್ಯ, ೧,೦೭೦ ಟನ್. ಸುಮಾರು ೯ ಸಾವಿರ ಭಾರವನ್ನು ಹೊರುವ ಸಾಮರ್ಥ್ಯಹೊಂದಿದೆ. ಪ್ರೇಕ್ಷಕರ ಗ್ಯಾಲರಿಯನ್ನು ಮೈದಾನಕ್ಕೆ ಹೊಂದಿಕೊಂಡಿರುವ ಸಮುದ್ರದ ತಟದಮೇಲೆ ನಿರ್ಮಿಸಲಾಗಿದ್ದು, ಸುಮಾರು ೩೦ ಸಾವಿರ ಪ್ರೇಕ್ಷಕರು, ಕುಳಿತು ಕ್ರೀಡೆಯನ್ನು ವೀಕ್ಷಿಸುವ ಆನಂದವನ್ನು ಅನುಭವಿಸಬಹುದು. ರಾತ್ರಿವೇಳೆಯ ವಿದ್ಯುತ್ ದೀಪದ ಅಲಂಕಾರದಲ್ಲಿ ಈ ಮೈದಾನದ ಸೊಬಗು ನೂರ್ಮಡಿಸಿದೆ. == ನಿರ್ಮಾಣಕ್ಕೆ ಉಪಯೋಗಿಸಲ್ಪಟ್ಟ ಕಬ್ಬಿಣ ಹಾಗೂ ಉಕ್ಕು == ತೇಲುವ ಮೈದಾನವನ್ನು ನಿರ್ಮಿಸಲು, ಕಬ್ಬಿಣ ಮತ್ತು ಉಕ್ಕಿನ ಸರಳನ್ನು ಬಳಸಿ, ತಯಾರಿಸಿದ್ದಾರೆ. 'ಸಿಂಗಪುರ್ ಸ್ಪೋರ್ಟ್ಸ್ ಕೌನ್ಸಿಲ್' ಈ 'ಬೃಹತ್ ಮೈದಾನದ ಮಾಲಿಕತ್ವ,' ಹಾಗೂ 'ನಿರ್ವಹಣಾ ಜವಾಬ್ದಾರಿ'ಯನ್ನು ಹೊತ್ತಿದೆ. ಅಂಗಳದ ಸುಂದರ ವಿನ್ಯಾಸವನ್ನು 'ಡಿಫೆನ್ಸ್ ಸೈನ್ಸ್ ಅಂಡ್ ಟೆಕ್ನಾಲಜಿ ಏಜೆನ್ಸಿ' ವಹಿಸಿಕೊಂಡಿದೆ. ಕ್ರೀಡೆಗಳು ನಡೆಯದ ಸಮಯದಲ್ಲಿ 'ಸಂಗೀತ ಕಚೇರಿಗಳು', 'ಸಾಂಪ್ರದಾಯಿಕ ಸಮಾರಂಭಗಳು' ಮುಂತಾದವುಗಳನ್ನು ಆಯೋಜನೆಯನ್ನು ಮಾಡಲಾಗುತ್ತದೆ. ಸನ್, ೨೦೦೭ ರ ಆಗಸ್ಟ್ ತಿಂಗಳಿನಲ್ಲಿ, ’ಸಿಂಗಪುರ ರಾಷ್ಟ್ರೀಯ ದಿನ’ ವನ್ನು ಮೊದಲಬಾರಿಗೆ ಅತ್ಯಂತ ಅದ್ಧೂರಿಯಿಂದ ಆಚರಿಸಲಾಯಿತು. ಕ್ರೀಡಾಂಗಣದ ಸುತ್ತಮುತ್ತಲೂ ಹಲವಾರು ’ಅತ್ಯುತ್ತಮ ಐಶಾರಾಮಿ ಹೋಟೆಲ್’ ಗಳಿವೆ. ಅವುಗಳಲ್ಲಿ ಪ್ರಮುಖವಾದವುಗಳು, 'ದ ರಿಟ್ಜ್ ಕಾರ್ಲ್ ಟೋನ್' 'ಒಲಿಂಪಿಕ್ ಫ್ಯಾಮಿಲಿ ಹೋಟೆಲ್' 'ಆಟದ ಮೈದಾನ'ದಿಂದ 'ವಿಮಾನ ನಿಲ್ದಾಣ'ಕ್ಕೆ ಹೆಚ್ಚೆಂದರೆ ೨೦ ನಿಮಿಷಗಳ ಸಮಯದ-ನಡಿಗೆಯಲ್ಲೇ ಸಾಗುವಷ್ಟು ಹತ್ತಿರದಲ್ಲಿ ನಿರ್ಮಿಸಲಾಗಿದೆ. ಹೆಚ್ಚಿನ ವಿವರಗಳ ಸಂಪರ್ಕ ಕೊಂಡಿ ://..//----/ 2010-07-22 ವೇಬ್ಯಾಕ್ ಮೆಷಿನ್ ನಲ್ಲಿ.